We use cookies to personalise content and ads, to provide social media features and to analyse our traffic. Read more…
Friday
30
MAR

ಸುಳ್ಳು ಹೇಳಿದ ಸತ್ಯ- _ವಾರೆನೋಟದ ನೇರ ಮಾತು - Book Release

10:00
13:00
TotalKannada
Event organized by TotalKannada

Get Directions

Category
#var:page_name# cover

ಕೊನೆಗೂ......

*ಸುಳ್ಳಿನ ಬಾಯಿಂದ ಸತ್ಯ ಹೇಳಿಸ* ಬೇಕೆನ್ನುವ ನನ್ನ ಪ್ರಯತ್ನಕ್ಕೆ ಕಾಲ ಕೂಡಿ ಬಂದಿದೆ....!.

_ಮಾರ್ಚ್ 30-2018
_ಗಂಟೆ : ಬೆಳಿಗ್ಯೆ 10-00 AM
_ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್_ _ವರ್ಲ್ಡ್ ಕಲ್ಚರ್, ಬಸವನ ಗುಡಿ ಬೆಂಗಳೂರು

ಬಿಡುಗಡೆಗೆ ಮುನ್ನವೇ ಡಾ.ದೊಡ್ಡರಂಗೇಗೌಡರಿಂದ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾದ ನನ್ನ ಚೊಚ್ವಲ ಕೃತಿ ಸಂಭ್ರಮ

*ಸುಳ್ಳು ಹೇಳಿದ ಸತ್ಯ- _ವಾರೆನೋಟದ ನೇರ ಮಾತು_*
ನವಿರು ಕವನ ಸಂಕಲನ ಬಿಡುಗಡೆಗೆ ಸಿದ್ಧವಾಗಿ ನಿಮ್ಮ ಅನುಮತಿಗೆ-ಉಪಸ್ಥಿತಿಗೆ ಕಾಯುತ್ತಿದೆ!.

ಅಂದು

*ಪದ್ಮಶ್ರೀ ಡಾ. ದೊಡ್ಡರಂಗೇಗೌಡ*
*ಚುಟುಕು ಬ್ರಹ್ಮ H.ಡುಂಡಿರಾಜ್*
*ಖ್ಯಾತ ಸಿನಿ ನಿರ್ದೇಶಕ ಟಿ.ಎಸ್. ನಾಗಾಭರಣ*
*ಹರಟೆ ಖ್ಯಾತಿಯ ವೈ.ವಿ. ಗುಂಡೂರಾವ್*
*ಮುಂಬೈ ರಂಗಭೂಮಿಯ ಮೇರು ನಟ ಮೋಹನ್ ಮಾರ್ನಾಡ್*
*ಮುಂಬೈ ಸಾಹಿತ್ಯ ಕ್ಷೇತ್ರದ ವಿಶಿಷ್ಠ ಹೆಸರು ವಿಶ್ವನಾಥ ಶೆಟ್ಟಿ ಪೇತ್ರಿ*
*ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಶೆಟ್ಟಿ*

ಇವರೆಲ್ಲರ *ದಿವ್ಯ ಸರಸ್ವತೀ ಸನ್ನಿಧಿಯಲ್ಲಿ ಈ ಸುಳ್ಳು ಸತ್ಯವನ್ನು ಹೇಳಿ* ನಿಮ್ಮೆದುರು ಶರಣಾಗಿ ತನ್ನ ಒಳಪುಟಗಳ ತುಮುಲಗಳನ್ನು ತೆರೆದಿಡಲಿದೆ.

30-03-2018 ರ ಶುಕ್ರವಾರದ ರಜಾದಿನದಂದು( *Good Friday*) ತಾವುಗಳು ಯಾವುದೇ ಅನ್ಯ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದೆ ನನ್ನ ಈ ಚೊಚ್ಚಲ *ಕೃತಿ* ಸಂಭ್ರಮಕ್ಕೆ ಸಾಕ್ಷಿಯಾಗಬೇಕು ಎನ್ನುವುದು ನನ್ನ ಪ್ರೀತಿ ಪೂರ್ವಕ ವಿನಂತಿ.

ದೊಡ್ಡ ರಂಗೇ ಗೌಡರ ಮತ್ತು ಟಿ.ಎಸ್. ನಾಗಾಭರಣ ಅವರ ಪ್ರಸಿದ್ಧ ಗೀತೆಗಳ ಗಾಯನ
(ಸುಧೀಂದ್ರ, ಗಣೇಶ್ ಪ್ರಸಾದ್, ಲಾವಣ್ಯ, ಲಕ್ಷ್ಮೀ ಶಾಸ್ತ್ರಿ, ಲಕ್ಷ್ಮೀ ಶೆಟ್ಟಿ, ಸುಧಾಕರ್ ಶೆಟ್ಟಿ,ವೀಣಾ ಮತ್ತು ಮೇಘನಾ)

▪ ಅಭಿವಂದನಾ
▪ ಪುಸ್ತಕ ಬಿಡುಗಡೆ
*ಮತ್ತು ಒಂದಿಷ್ಟು ಮನಸ್ಸು ಹಗುರಾಗುವ ಹಾಸ್ಯ

ಇವೆಲ್ಲಕ್ಕೂ ಪಾಲುದಾರರಾಗಲು
ತಮ್ಮ ಅತ್ಮೀಯ ನಿರೀಕ್ಷೆಯಲ್ಲಿರುವ
ಶಾಂತಾರಾಮ್ ವಿ.ಶೆಟ್ಟಿ
➖➖➖➖➖🙏🏾🌷

(ಸತ್ಯವನ್ನೇ ಹೇಳುತ್ತೇವೆ ನಾವು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಅರಂಭಿಸುತ್ತೇವೆ!)